ಕನ್ನಡಿಗರಿಗೆ ಭಾಷಾಭಿಮಾನ ಮೂಡುವುದು ಯಾವಾಗ? | ಮಧುಮತಿ ವಿಶೇಷ ಲೇಖನ
ಲೇಖಕರು: ಮಧುಮತಿ 19, 20ನೇ ಶತಮಾನದ ಕರ್ನಾಟಕ ಏಕೀಕರಣ ಚಳುವಳಿಯ ಉದ್ದೇಶ, ಬ್ರಿಟಿಷರ ಆಡಳಿತಾವಧಿಯಲ್ಲಿ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು...
ಲೇಖಕರು: ಮಧುಮತಿ
19, 20ನೇ ಶತಮಾನದ ಕರ್ನಾಟಕ ಏಕೀಕರಣ ಚಳುವಳಿಯ ಉದ್ದೇಶ, ಬ್ರಿಟಿಷರ ಆಡಳಿತಾವಧಿಯಲ್ಲಿ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವುದು. ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ ಮುಂತಾದವರು ಇದರ ನೇತೃತ್ವ ವಹಿಸಿದ್ದರು. ಅದರ ಪರಿಣಾಮವೆಂಬಂತೆ 1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು 1905ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಭಾಷಾ ಪ್ರಜ್ಞೆ ಮೂಡಿಸಲಾಯಿತು.
ನಾವು ಕನ್ನಡಿಗರು, ಸ್ವಾಭಿಮಾನಿಗಳು, ಸಹೃದಯರು, ಆಹಾ! ಹೇಳಿಕೊಳ್ಳಲು ಎಷ್ಟು ಚಂದ ಅಲ್ಲಾ? ಒಮ್ಮೊಮ್ಮೆ ಅನಿಸುತ್ತದೆ, ನಿಜವಾಗಿಯೂ ನಾವು ಕನ್ನಡಿಗರಾ? ಎಂದು. ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇದೆಯೆ? ಅಭಿಮಾನ, ಸ್ವಾಭಿಮಾನ ಇದೆಯೆ? ಕನ್ನಡಿಗರಾದ ನಮಗೆ ನಮ್ಮ ಮಾತೃಭಾಷೆಯ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ನಮ್ಮ ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡದ ಕಂಪು ಪಸರಿಸುತ್ತಿತ್ತು. ನಮ್ಮ ಕನ್ನಡದ ನೆಲದಲ್ಲಿ ಅನ್ಯ ಭಾಷೆಯವರು ಕಾಲಿಟ್ಟ ಕೂಡಲೇ ಕನ್ನಡ ಭಾಷೆಯಲ್ಲಿ ಮಾತನಾಡಬೇಕು, ಕನ್ನಡ ಕಲಿಯಬೇಕು, ಕನ್ನಡದಲ್ಲಿ ವ್ಯವಹರಿಸಬೇಕು ಇಲ್ಲವೇ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಬೇಕು ಎಂದು ಅವರಿಗವರೇ ನಿರ್ಧರಿಸಿ ಬಿಡುತ್ತಿದ್ದರು.
ಉಹುಂ, ವಾಸ್ತವದಲ್ಲಿ ಅದಾಗಿಲ್ಲ. ಅನ್ಯ ಭಾಷಿಕರು ಯಾರು ಬೇಕಾದರೂ ಬರಬಹುದು. ಬಂದು ವಾಸ್ತವ್ಯ ಹೂಡಬಹುದು. ಕನ್ನಡಿಗರ ಬಳಿ ಅವರವರ ಭಾಷೆಯಲ್ಲಿಯೇ ಮಾತನಾಡಬಹುದು. ನಾವು ಅವರ ಬಳಿ ಅವರ ಮಾತೃಭಾಷೆಯಲ್ಲಿಯೇ ಸಂವಹನ ನಡೆಸುತ್ತೇವೆ. ಬೇರೆ ಭಾಷೆಯೂ ನಮಗೆ ಬರುತ್ತದೆ ಎಂದು ಪ್ರದರ್ಶಿಸುತ್ತೇವೆ. ನಾವು ಯಾವ ನಾಡಿನ ನೆಲದ ಮೇಲೆ ನಿಂತಿದ್ದೇವೆ. ಯಾವ ಭಾಷೆ ನಮ್ಮನ್ನು ಸಾಕಿ ಸಲುಹುತ್ತಿದೆ ಎಂಬುದನ್ನು ಮರೆತು ವರ್ತಿಸುತ್ತೇವೆ.
ನಿಜವಾಗಿಯೂ ನಮ್ಮೆಲ್ಲರಿಗೆ ತಾಯಿ ಭಾಷೆಯ ಮೇಲೆ ನಿಜವಾದ ಪ್ರೀತಿ ಇದೆಯೆ? ನವೆಂಬರ್ ತಿಂಗಳಿನಲ್ಲಿ ಎದ್ದು ಕನ್ನಡ, ಭಾಷೆ, ನೆಲ, ಜಲ, ಸಂಸ್ಕೃತಿ ಎಂದೆಲ್ಲಾ ವೀರಾವೇಶದಿಂದ ಮಾತನಾಡುವವರು ಒಮ್ಮೆ ಹೃದಯದ ತಪಾಸಣೆಗೆ…
📖 ಈ ಕುರಿತ ಪೂರ್ಣ ಲೇಖನವನ್ನು ಭಾವಸಿಂಚನ ನವೆಂಬರ್ 1ರ ಸಂಚಿಕೆ ಓದಿ.

ನವೆಂಬರ್ ಸಂಚಿಕೆ
ಭಾವಸಿಂಚನ ಪತ್ರಿಕೆಯ ಚಂದಾದಾರರಾಗಲು ಹಾಗೂ ಸಂಚಿಕೆಗಳಿಗಾಗಿ ಇಂದೇ ಸಂಪರ್ಕಿಸಿ:
👤 ಪ್ರಧಾನ ಸಂಪಾದಕರು: ಭದ್ರಾವತಿ ರಾಮಾಚಾರಿ
📞 ಮೊಬೈಲ್ / ವಾಟ್ಸಾಪ್: 8861495610
✉️ ಇ-ಮೇಲ್: bhavasinchanamagazine@gmail.com
🌐 ವೆಬ್ಸೈಟ್: bhavasinchana.com
(ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕನ್ನಡಾಭಿಮಾನಿಗಳೊಂದಿಗೆ ಶೇರ್ ಮಾಡಿ!)
No Comment! Be the first one.